Skip to main content

ಒಂಟಿ ನೀ ಬರುವಾಗ ಒಂಟಿ ನೀ ಹೋಗುವಾಗ









ಒಂಟಿ ನೀ ಬರುವಾಗ
ಒಂಟಿ ನೀ ಹೋಗುವಾಗ
ಜಂಟಿ ನೀ ಮಧ್ಯೆ ಜಗದಾಗ
ಗಳಿ ಗಳಿಗೆ ಬದುಕಿ ತಿರು ಪಯಣ ಮುಗಿಯೂದರಗ

ಹಸಿ ಶುಂಠಿ ಹರೆಯದಾಗ ಜನ ಸೇವೆ ಮಾಡು ಆಗ
ಒಣ ಶುಂಠಿ ಮುಪಿನಾಗ ಅನುಭವಗಳ ಹರಡಿ ಹೋಗ 
ಮಧ್ಯೆ ಜೀವನದ ರಾಗ ರೋಗ ,ಅನುಭವಿಸುತಾ ಮುಂದೆ ಹೋಗ

ಒಂಟಿ ನೀ ಬರುವಾಗ
ಒಂಟಿ ನೀ ಹೋಗುವಾಗ
ಜಂಟಿ ನೀ ಮಧ್ಯೆ ಜಗದಾಗ
ಗಳಿ ಗಳಿಗೆ ಬದುಕಿ ತಿರು ಪಯಣ ಮುಗಿಯೂದರಗ

ಹಣ ಹೆಣು ಮಣ್ಣು ಬಲು ಮೋಸದ ಜಾಗ
ಗುರು ಹಿರಯರು ದೈವ , ದಾರಿತೋರುವರು ಆಗ
ಮತಿಗೆಟ್ಟು ನಡೆಯದಿರು ಪಡೆವೆ ಗೆಲುವಿನ ಯೋಗ

ಒಂಟಿ ನೀ ಬರುವಾಗ
ಒಂಟಿ ನೀ ಹೋಗುವಾಗ
ಜಂಟಿ ನೀ ಮಧ್ಯೆ ಜಗದಾಗ
ಗಳಿ ಗಳಿಗೆ ಬದುಕಿ ತಿರು ಪಯಣ ಮುಗಿಯೂದರಗ

-       ಮುಜಮಮು

Comments